Jump to content

User talk:Harisha ms manchibeedu

Page contents not supported in other languages.
From Wikipedia, the free encyclopedia

ಮಂಚಿಬೀಡು ಇತಿಹಾಸ & MANCHIBEEDU HISTORY

ಇತಿಹಾಸ ಪುಟಗಳಲ್ಲಿ ಮಂಚಿಬೀಡು ಮತ್ತು ಮಂಚಿಬೀಡಿನ ಶಾಸನಗಳು.

ಎತ್ತರವಾದ ಬೀಡು ಮಂಚಿಬೀಡು . ಹೆಸರೇ ಹೇಳುವಂತೆ ಹಿಂದೆ ಇಲ್ಲಿ ಮಂಚಿನಪತ್ರೆ ಎಂಬ ಹೂಗಳನ್ನು ಬೆಳೆಯುತ್ತಿದ್ದರಂತೆ, ಇದರಿಂದ ಕ್ರಮೇಣ ಇದೇ ಮಂಚಿಬೀಡು ಎಂದು ಪರಿವರ್ತನೆಗೊಂಡಿದೆ.

ಗ್ರಾಮ  :- ಮಂಚಿಬೀಡು ತಾಲ್ಲೂಕು :- ಕೆ.ಆರ್.ಪೇಟೆ ಜಿಲ್ಲೆ :- ಮಂಡ್ಯ. ರಾಜ್ಯ :- ಕರ್ನಾಟಕ

ಮಂಚಿಬೀಡು ಇತಿಹಾಸ:- ಶಾಸನ ಸಂಖ್ಯೆ- 84

ಗ್ರಾಮ - - ಮಂಚಿಬೀಡು ಸ್ಥಳ - - ಈಶ್ವರ ದೇವಾಲಯದ ಹತ್ತಿರ. ಕಾಲ - - ಕ್ರಿ.ಶ. ಸುಮಾರು 11 ನೇ ಶತಮಾನ. ಲಿಪಿ ಮತ್ತು ಭಾಷೆ - ಕನ್ನಡ. ವರದಿ ಪ್ರಕಟಣೆ - ಎ.ಕ.ಸಂ.೪ / ಶಾ.ಸಂ.೧೭/ಪುಟ.೧೩/ ಸಾರಾಂಶ - ಶಾಸನವು ಬಿರಿವಳಿಯ ಪಟ್ಟಕಾಯ ಕಲಿಯಮ್ಮ ಗೋವಬೆಟ್ಟದ ಮಡಿವಳ್ಳ ನಾಗಿಯಣ್ಣನು ತುರುಗೊಳ್ ಯುದ್ಧದಲ್ಲಿ ಕಳ್ಳರನ್ನು ಕೊಂದು ಸ್ವರ್ಗಸ್ತನಾದ ವಿಚಾರವನ್ನು ಉಲ್ಲೇಖಿಸುತ್ತದೆ.ಈ ವೀರಗಲ್ಲನ್ನು ಪುಳಿಯಬ್ಬೆ ಮತ್ತು ಸಳಪಯ್ಯ ನಿಲ್ಲಿಸಿದರು.



ಮಂಚಿಬೀಡು ಶಾಸನ ಸಂಖ್ಯೆ : 85 ಗ್ರಾಮ.  : ಮಂಚಿಬೀಡು

                     ಸ್ಥಳ.          :ಈಶ್ವರ ದೇವಾಲಯದ ಹತ್ತಿರ
                     ಕಾಲ          :  ಕ್ರಿ.ಶ.1379 ಅಕ್ಟೋಬರ್ 12 ಲಿಪಿ & ಭಾಷೆ :    ಕನ್ನಡ     
                   ವರದಿ ಪ್ರಕಟಣೆ :  ಎ.ಕ.ಸಂ.4/ ಶಾ.ಸಂ.18/ ಪುಟ 13 & 14

ಸಾರಾಂಶ :ಪ್ರಸ್ತುತ ಶಾಸನವು ಶಕವರ್ಷ 1301 ಸಿದ್ದಾರ್ಥಿ ಸಂವತ್ಸರದ ಕಾರ್ತಿಕ ಶುದ್ಧ 1 ರಂದು ಮಲ್ಲಿಗೌಡನ ಮಗ ಮಲ್ಲಿಗೆ ಕೊಡಗಿಯ ಕೊಟ್ಟನು ವೀರಗಲ್ಲನ್ನು ನಿಲ್ಲಿಸಿದ ಕುರಿತು ಉಲ್ಲೇಖಿಸುತ್ತದೆ. ಈ ವೀರಗಲ್ಲನ್ನು ಬಾನಹಳ್ಳಿಯ ಮಲ್ಲಿಗೆರೋಜನು ಕುಂಡರಿಸಿದ್ದಾನೆ. ಈ ವೀರಗಲ್ಲನ್ನು ಕೈಲಾಸವೆಂದು ಕರೆದಿರುವುದು ವಿಶೇಷ.

ಮಂಚಿಬೀಡು ಈಶ್ವರ ದೇವಾಲಯ : ಕ್ರಿ.ಶ.ಸುಮಾರು 13 ನೇ ಶತಮಾನ

ಮಂಚಿಬೀಡಿನ ಈ ದೇವಾಲಯವು ಪೂರ್ವಾಭಿಮುಖವಾಗಿ ಇದೆ. ಇದು ಗ್ರಾಮದ ಪೂರ್ವ ಬದಿಯಲ್ಲಿ ಇದೆ. ಈ ದೇವಾಲಯಕ್ಕೆ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಬಳಪದ ಕಲ್ಲಿನಿಂದ ನಿರ್ಮಿತಗೊಂಡಿರುವ ದೇವಾಲಯವು ಸಂರಕ್ಷಣೆಯಾಗಬೇಕಾಗಿದೆ.

ಈ ದೇವಾಲಯದ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ ಆದರೆ ವಾಸ್ತು ಲಕ್ಷಣಗಳು ದೋರಸಮುದ್ರದ ಹೊಯ್ಸಳರ ಕಾಲದ್ದಾಗಿದೆ.ಇದರ ಊರ್ಧ್ವ ಮುಖ ಮತ್ತು ತೀರ್ಯಜ್ಮುಖ ವಾಸ್ತು ಲಕ್ಷಣಗಳು ಈ ಕೆಳಗಿನಂತಿವೆ.

ಊರ್ಧ್ವ ಮುಖ ವಾಸ್ತು ಲಕ್ಷಣಗಳು :-

 ಅಧಿಷ್ಟಾನವು ಮಣ್ಣಿನಿಂದ ಮುಚ್ಚಿದೆ. ಭಿತ್ತಿಯಲ್ಲಿ ಕುಡ್ಯ ಸ್ಥಂಭಗಳಿವೆ.ಜೊತೆಗೆ ನಾಗರ ಶೈಲಿ ಶಿಖರಗಳ ಪ್ರತಿರೂಪಗಳಿವೆ.

ತೀರ್ಯಜ್ಮುಖ ವಾಸ್ತು ಲಕ್ಷಣಗಳು  :-

1 : ಗರ್ಭಗೃಹ :- ಇದು ಚೌಕಾಕಾರವಾಗಿದೆ.ಇದರ ನಾಲ್ಕು ಮೂಲೆಗಳಲ್ಲಿ ಅರ್ಧಗಂಭಗಳಿವೆ. ಭಿತ್ತಿ ಸರಳವಾಗಿದೆ. ವಿತಾನದಲ್ಲಿ ಪದ್ಮಮಂಡಲದ ಅಲಂಕಾರವಿದೆ . ದ್ವಾರ ಬಂಧದಲ್ಲಿ ನಾಲ್ಕು ಶಾಖೆಗಳಿವೆ. ಲಲಾಟಪಟ್ಟಿ ಮತ್ತು ಪೇದ್ಯಾಪಿಂಡಗಳು ನೀಲಂಕೃತವಾಗಿವೆ.ಗರ್ಭ ಗೃಹದಲ್ಲಿ ಶಿವಲಿಂಗವಿದೆ.

2 : ಅಂತರಾಳ :- ಇದು ಚೌಕಾಕಾರವಾಗಿದೆ.ಇದರ ನಾಲ್ಕು ಮೂಲೆಗಳಲ್ಲಿ ಅರ್ಧಗಂಭಗಳಿವೆ. ಭಿತ್ತಿ ನೀಲಂಕೃತವಾಗಿದೆ. ಲಲಾಟಪಟ್ಟಿ ಮತ್ತು ಪೇದ್ಯಾಪಿಂಡಗಳು ನೀಲಂಕೃತವಾಗಿದೆ. ವಿತಾನದಲ್ಲಿ ಪದ್ಮ ಮಂಡಲದ ಅಲಂಕಾರವಿದೆ. ದ್ವಾರಬಂಧದಲ್ಲಿ ನಾಲ್ಕು ಶಾಖೆಗಳಿವೆ. ಲಲಾಟ ಪಟ್ಟಿಸಿಗುತ್ತದೆ ಜಲಕ್ಷ್ಮಿಯ ಉಬ್ಬು ಶಿಲ್ಪವಿದೆ. ಪೇದ್ಯಾಪಿಂಡವು ನೀಲಂಕೃತವಾಗಿದೆ.

3 : ನವರಂಗ  : ಇದರ ಮಧ್ಯದಲ್ಲಿ ನಾಲ್ಕು ಸ್ವತಂತ್ರ ರುದ್ರಕಾಂತ ಶೈಲಿಯ ಸ್ಥಂಭಗಳಿವೆ. ಇವುಗಳಲ್ಲಿ ಕ್ರಮವಾಗಿ ಪೀಠ, ಪಾದ, ದಂಡ, ಫಲಕ, ಮತ್ತು ಬೋದಿಗಳಿವೆ. ಭಿತ್ತಿಯಲ್ಲಿ ಹನ್ನೆರಡು ಅರ್ಧಗಂಭಗಳಿವೆ. ವಿತಾನದ ಮಧ್ಯದಲ್ಲಿ ಪದ್ಮ ಮಂಡಲದ ಅಲಂಕಾರವಿದೆ. ದ್ವಾರಬಂಧದಲ್ಲಿ ಪಂಚ ಶಾಖೆಗಳಿವೆ .ಇವುಗಳಲ್ಲಿ ಸ್ಥಂಭಶಾಖೆ ಪ್ರಧಾನವಾಗಿದೆ. ಲಲಾಟ ಪಟ್ಟಿಯಲ್ಲಿ ಗಜಲಕ್ಷ್ಮಿಯ ಉಬ್ಬು ಶಿಲ್ಪವಿದೆ. ಪೇದ್ಯಾ ಪಿಂಡವು ನೀಲಂಕೃತವಾಗಿದೆ.

ಈ  ದೇವಾಲಯವು ಮಂಚಿಬೀಡು ಬಸ್ ನಿಲ್ದಾಣದ ಹಿಂದೆ ಇದೆ.  ಈ ದೇವಾಲಯದ ಮುಂದೆ ಸರ್ಕಾರಿ ಪ್ರಾಥಮಿಕ ಶಾಲೆ ಇದೆ.


ಗೆಳೆಯರೆ ಮೇಲೆ ವಿವರಿಸಿದ ಶಾಸನಗಳು  ಮಂಚಿಬೀಡಿನ ಹೊಸ ಬಸವೇಶ್ವರ ದೇವಸ್ಥಾನದ ಬಲಭಾಗದಲ್ಲೊಂದು ಶಾಸನ ( ಈ ಶಾಸನ ವಿದ್ಯುತ್ ಕಂಬದ ಪಕ್ಕದಲ್ಲಿದೆ).

ಮತ್ತು ದೇವಾಲಯದ ಬಳಿ ಇರುವ ಸೇತುವೆಯ ಪಕ್ಕದಲ್ಲೊಂದು ಶಾಸನ ಇದೆ.( ಈ ಶಾಸನ ವೀರಭದ್ರೇಶ್ವರ ದೇವಾಲಯಕ್ಕೆ ಹೋಗುವಾಗ ರಸ್ತೆಯಲ್ಲಿ ಎಡಭಾಗಕ್ಕೆ ಸಿಗುತ್ತದೆ. ನೇರವಾಗಿ ಬಸವೇಶ್ವರ ದೇವಾಲಯದ ಮುಂದೆಯೇ ಇದೆ).

ಮಂಚಿಬೀಡು ಇತಿಹಾಸದಲ್ಲಿ ಬರುವ ವಿಚಾರಗಳನ್ನು ಸಂಗ್ರಹಿಸಲು ನಾನು ಬಹಳ ಶ್ರಮವಹಿಸಿರುತ್ತೇನೆ. ಆದ್ದರಿಂದ ನೀವುಗಳು ಇದನ್ನು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳುವುದರ ಮೂಲಕ , ಇನ್ನಷ್ಟೂ ವಿಚಾರಗಳನ್ನು ಕಲೆಹಾಕಲು ಪ್ರೋತ್ಸಾಹಿಸಿ.

ಇಂತಿ:- ಹರೀಶ ಎಂ.ಎಸ್.( ಧರ್ಮ) (ಹರೀಶ್ ವಿವೇಕಾನಂದ ಮಂಚಿಬೀಡು)

Start a discussion with Harisha ms manchibeedu

Start a discussion